ದಿಕ್ಕು ತಪ್ಪಿತೆ ಸಮಾಜ

 *ಪ್ರೇಕ್ಷಕನ ವಿಭಿನ್ನ ಅಭಿರುಚಿ*

ಈಗ್ಗೆ ಕೆಲ ವರ್ಷಗಳಿಂದ ಪ್ರೇಕ್ಷಕನ ಅಭಿರುಚಿ ಬದಲಾಗಿದೆ. ಜನ ಏನನ್ನು ಬಯಸುತ್ತಿದ್ದಾರೆ ಅನ್ನುವುದೆ ಒಂದು ಯಕ್ಷಪ್ರಶ್ನೆ, ಬೇದಿಸಲಾಗದ ಕಗ್ಗಂಟು, ಹಾಗೂ ಚಕ್ರವ್ಯೂಹ ?? 

ಇವರುಗಳ ಅಭಿರುಚಿ ಅಭಿಲಾಷೆಗಳನ್ನ ನೋಡಿದರೆ ತಲೆ ತಿರುಗುವಂತಾಗಿದೆ. ನೀರಿನಲ್ಲಿನ ಮೀನಿನ ಹೆಜ್ಜೆಯಂತಾಗಿದೆ. ಡಿಜಿಟಲ್ ಯುಗ ವೀಕ್ಷಕರ ಅಭಿರುಚಿ ಬದಲಾದಂತಿದೆ. ಎಪ್ಪತ್ತರಿಂದ ಎಂಬತ್ತರ ದಶಕದ ಜನತೆಗೆ ಡಾ||ರಾಜ್ ಡಾ||ವಿಷ್ಣುವರ್ಧನ್ ಹಾಗೂ ಡಾ||ಅಂಬರೀಶ್ ಅನಂತನಾಗ್, ಅಮಿತಾಬ್, ಹೀಗೆ ಹಲವಾರು ಮೇರು ನಟರ ಚಲನಚಿತ್ರಗಳಂತಹ ಚಿತ್ರಗಳನ್ನೆ ಕಾಯುತ್ತಾ ನೋಡುತ್ತಾ ಆನಂದಿಸುತ್ತಿದ್ದ ಪೀಳಿಗೆ, ಕಾಲಕ್ರಮೇಣ ಕೈಗೊಂದು ಮೊಬೈಲ್ ಹಾಗೂ ಆದಕ್ಕೊಂದು ಇಂಟರ್ ನೆಟ್ ಪ್ಯಾಕ್ ಅಗ್ಗದ ದರದಲ್ಲಿ ದೊರೆತಿದ್ದು. ನೋಡುಗರ ಅಭಿರುಚಿಯನ್ನೆ ಬದಲಿಸಿದೆ. ಮಿಂಚಿನಂತೆ ಪಸರಿಸುವ ವಿಚಾರಗಳು ಕೂತಲ್ಲೆ ಸ್ಕ್ರೋಲ್ ಡೌನ್ ಮಾಡುತ್ತ ಕಮೇಂಟ್ ಹಾಕುತ್ತಾ ಸಂತೋಷ ಪಡುವ ಜನ. ತಿಯೇಟರ್ ನತ್ತ ಮುಖ ಮಾಡದೆ ಅಂಗೈಯಲ್ಲೆ ಆಕಾಶ ತೊರಿಸುವ ಹಾಗೂ ಮನರಂಜನೆ ಕೂತಲ್ಲೆ ಅನುಭವಿಸುತ್ತಿದ್ದಾರೆ. ಟ್ರೋಲಿಂಗ್ ಟ್ರೆಂಡ್ ನದ್ದೆ ಹವ. 

*ಟ್ರೆಂಡಿಂಗ್*

ಕಲೆಗೆ ಮೊದಲ ಆದ್ಯತೆ ಇದ್ದ ಪರಿಸರ ಬದಲಿಸಿದೆ. ಕಲಸರಸ್ವತಿ ಎಲ್ಲರನ್ನೂ ಕೈ ಬೀಸಿ ಕರೆದು ಅದರಲ್ಲಿ ಕಲೆಗಾರರನ್ನ ಮಾತ್ರ ಆರಿಸುತ್ತಾಳೆ ಎಂಬ ಪುರಾತನ ನುಡಿ ಮರೆಯಾದಂತಿದೆ. ಹಳೆಯ ಚಲನಚಿತ್ರಗಳ ಹಾಡುಗಳ ಸಾಲು ಸಾಲು ಮೈಮನ ಮುಟ್ಟುವಂತಹ ಸಾಹಿತ್ಯ, ಕಿವಿಯಲ್ಲಿ ಗ್ಯೂಯ್ ಗುಡುತ್ತಾ ಹೃದಯಂತರಾಳದಲ್ಲೆ ಮನೆ ಮಾಡಿದೆ. ಅವರುಗಳ ಕನ್ನಡ ಹಾಗೂ ಸಾಹಿತ್ಯ, ಪದಜೋಡಣೆಗಳು ಎಲ್ಲರಿಗೂ ಒಲಿಯದ ಕಲೆ. 

ಈಗ ಅದೆ ಕಗ್ಗೊಲೆಯಾಗಿದೆ, ಅಯ್ಯೋ ಆ ಯೂಟೂಬ್ ಶಾಟ್ ಗಳ ಟ್ರೆಂಡಿಗ್ ನೋಡಿದರೆ ಹುಚ್ಚು ಹಿಡಿದವರಂತೆ ಕುಣಿದು ಕುಪ್ಪಳಿಸುವ ಪ್ರಾಸಗಳು, ಸುಳ್ಳಿಗೊಂದು ಸುಳ್ಳು ಹೇಳುವುದು ಅವರ ಹಿಂದೆ ಈ ಮೀಡಿಯ ಸುತ್ತಿ ಬೈಟ್ ಗಳ ಹಾವಳಿ ಒಂದು ವಿಬಿನ್ನವಾದ ಟ್ರೆಂಡಿಂಗ್ ಆಗಿಹೋಗಿದೆ. ಚಲನಚಿತ್ರ ಪ್ರಮೋಶನ್ ಗೆ ಪೆಟ್ರೊಲ್ ಕುಡಿದವನು, ತಲೆಕೂದಲ ಬಣ್ಣ ಹಾಕಿಸಿ ವಿಚಿತ್ರವಾಗಿ ಹೇರ್ ಮಾಡಿಸಿ ಮನಬಂದಂತೆ ಆಡುವುದು, ಇದರೊಂದಿಗೆ ಕೆಲದಿನಗಳಿಂದ ಪ್ರಸಿದ್ದವಾದದು ಕೋಟಿ ಬೆಲೆಬಾಳುವಂತಹ ನಾಯಿ ಹಿಡಿದು ಊರೆಲ್ಲ ಸುತ್ತಿ ಸಮಾರಂಭ ಭಾಗವಹಿಸುತ್ತಾ ಸುಳ್ಳಿನ ಸರಮಾಲೆ ಪೋಣಿಸುವುದು ಇದು ಕೂಡ ಒಂದು ಕಲೆಯೆಂದು ಕೊಲೆಯಾಗಿ ಹೋಗಿದೆ. ಇದನ್ನೆಲ್ಲ ಯಾರು ನಂಬುತ್ತಾರೊ, ಯಾರಿಗೂ ಬೇಡದ ವಿಚಾರವಿದ್ದರು ಅದರ ವ್ಯೂಸ್ ಗಳನ್ನ ನೋಡಿದರೆ ಓಹೋ ಈ ಜನ ಇದನ್ನೆ ಬಯಸುತ್ತಿದ್ದಾರೆನೋ ಎಂದು ಅನಿಸುತ್ತದೆ. 

ಸಮಾಜದ ವಿರುದ್ದ, ಸರ್ಕಾರಗಳ ವಿರುದ್ದ, ಅಷ್ಟೇಕೆ ನಮ್ಮ ಜನ್ಮಕೊಟ್ಟ ತಾಯಿನಾಡಿನ ಬಗ್ಗೆ, ವಿರೋದಿ ದೇಶಗಳ ಬಗ್ಗೆ ಮಾತನಾಡಿದರೆ ಸಾಕು, ಬೆಳಗಾಗುವದರೊಳಗೆ ಅವನ ಮನೆಮುಂದೆ ಮೀಡಿಯಾ ಸಾಲುಗಟ್ಟಿ ಸೆಲೆಬ್ರಿಟಿ ಸ್ಟೇಟಸ್ ಪಟ್ಟ ಕಟ್ಟಿಬಿಡುತ್ತದೆ. ಉತ್ತಮ ಶಿಕ್ಷಣ ಪಡೆದು ಸ್ವಾವಲಂಬಿ ಜೀವನಕ್ಕೆಂದು ಶ್ರಮಿಸಿ ಬದುಕು ಕಟ್ಟಿಕೊಳ್ಳುವವ ಮರ್ಯದೆಗೆ ಹೆದರಿ ಜೀವನ ಸಾಗಿಸುವವ ಒಂದು ಕಡೆಯಾದರೆ ಮೂರು ಬಿಟ್ಟವನು ನಾಡಿಗೆ ದೊಡ್ದವನಂತೆ ಆಗಿದೆ ಇಗಿನ ಟ್ರೆಂಡಿಂಗ್. 


ಹಾಗಂತ ಎಲ್ಲವೂ ಆ ರೀತಿ ಇಲ್ಲ ಕೆಲವೊಂದು ಉಪಯುಕ್ತ ಮಾಹಿತಿಗಳು ಅಲ್ಲಲ್ಲಿ ಅಡ್ಡಾಡುತ್ತಿವೆ. ಕೃಷಿಯಲ್ಲಿನ್ನ ಅನ್ವೇಶಣೆಗಳು, ಮಾಹಿತಿ ತಂತ್ರಜ್ನಾನ ಉಪಯುಕ್ತ  ಮಾಹಿತಿಗಳು ಕೆಲ ಅನ್ನದಾತನ ಕೈಸೇರುವುದು ಉಂಟು, ಗುಡಿಕೈಗಾರಿಕೆ ಮಾಡುವವರಿಗೆ, ಮಹಿಳೆಯರ ಸಭಲಿಕರಣಕ್ಕೆ ಅನುಗುಣವಾಗುವಂತ ಕಾರ್ಯಕ್ರಮಗಳು ಹರಿದಾಡುತ್ತಿವೆ. (ಅಬ್ಬರ ಕಡಿಮೆ). ಇದು ಕೆಲವರಿಗಂತೂ ಅನುಕೂಲಗಳು ಆಗುತ್ತಿವೆ. 

ಕಲೆಗೊಂದು ಬೆನ್ನು ತಟ್ಟಿ, ಇಲ್ಲದವಗೆ ಕೆನ್ನೆಗೆ ತಟ್ಟಿ. 


*ಬೇವು - ಬೆಲ್ಲ*


ಮಾರ್ಚ್ ಗುರುವಾರ 19 ಕ್ಕೆ ಯುಗಾದಿ ಬರುತಿದೆ. ಕಳೆದ ವರುಷ ತಿಂದ ಬೇವು ಕೆಲ ಕಹಿ ಘಟನೆಗಳಾಗ್ಗಿದ್ದರೆ, ಬೆಲ್ಲವನ್ನೂ ತಿಂದ ನಿಮಗೆ ಸಿಹಿಯ ಅನುಭವಗಳೂ ಆಗಿರುತ್ತವೆ. ಇದುವೆ ಜೀವನ, ಬೇವಿದ್ದರೆ ಮಾತ್ರ ಬೆಲ್ಲಕ್ಕೆ ಬೆಲೆ ಎನ್ನುವ ಕಹಿ ಸತ್ಯ ತಿಳಿದು. ಓದುಗರಿಗೆಲ್ಲ ಯುಗಾದಿ ಹಬ್ಬದ ಶುಭಾಷಯಗಳನ್ನ ತಿಳಿಸುತ್ತ ಜನತೆಯ ಧನಿ ಪತ್ರಿಕೆ ಮೂಲಕ ಎಲ್ಲರಿಗೂ ಶುಭ ಹಾರೈಸುತ್ತ ನಿಮ್ಮ ಜೀವನದಲ್ಲಿ ಸಿಹಿಯೆ ಹೆಚ್ಚಾಗಲಿ ಎಂದು ಹರಸುತ್ತಾ.

ನಿಮ್ಮವ

*ಶಿವಕುಮಾರ್ ಬಿ ಎಲ್*

ಬೆಸಗರಹಳ್ಳಿ 

ರೋಟರಿ ಸಂಸ್ಥೆ

Comments