Posts

Showing posts from March, 2026

ದಿಕ್ಕು ತಪ್ಪಿತೆ ಸಮಾಜ

 *ಪ್ರೇಕ್ಷಕನ ವಿಭಿನ್ನ ಅಭಿರುಚಿ* ಈಗ್ಗೆ ಕೆಲ ವರ್ಷಗಳಿಂದ ಪ್ರೇಕ್ಷಕನ ಅಭಿರುಚಿ ಬದಲಾಗಿದೆ. ಜನ ಏನನ್ನು ಬಯಸುತ್ತಿದ್ದಾರೆ ಅನ್ನುವುದೆ ಒಂದು ಯಕ್ಷಪ್ರಶ್ನೆ, ಬೇದಿಸಲಾಗದ ಕಗ್ಗಂಟು, ಹಾಗೂ ಚಕ್ರವ್ಯೂಹ ??  ಇವರುಗಳ ಅಭಿರುಚಿ ಅಭಿಲಾಷೆಗಳನ್ನ ನೋಡಿದರೆ ತಲೆ ತಿರುಗುವಂತಾಗಿದೆ. ನೀರಿನಲ್ಲಿನ ಮೀನಿನ ಹೆಜ್ಜೆಯಂತಾಗಿದೆ. ಡಿಜಿಟಲ್ ಯುಗ ವೀಕ್ಷಕರ ಅಭಿರುಚಿ ಬದಲಾದಂತಿದೆ. ಎಪ್ಪತ್ತರಿಂದ ಎಂಬತ್ತರ ದಶಕದ ಜನತೆಗೆ ಡಾ||ರಾಜ್ ಡಾ||ವಿಷ್ಣುವರ್ಧನ್ ಹಾಗೂ ಡಾ||ಅಂಬರೀಶ್ ಅನಂತನಾಗ್, ಅಮಿತಾಬ್, ಹೀಗೆ ಹಲವಾರು ಮೇರು ನಟರ ಚಲನಚಿತ್ರಗಳಂತಹ ಚಿತ್ರಗಳನ್ನೆ ಕಾಯುತ್ತಾ ನೋಡುತ್ತಾ ಆನಂದಿಸುತ್ತಿದ್ದ ಪೀಳಿಗೆ, ಕಾಲಕ್ರಮೇಣ ಕೈಗೊಂದು ಮೊಬೈಲ್ ಹಾಗೂ ಆದಕ್ಕೊಂದು ಇಂಟರ್ ನೆಟ್ ಪ್ಯಾಕ್ ಅಗ್ಗದ ದರದಲ್ಲಿ ದೊರೆತಿದ್ದು. ನೋಡುಗರ ಅಭಿರುಚಿಯನ್ನೆ ಬದಲಿಸಿದೆ. ಮಿಂಚಿನಂತೆ ಪಸರಿಸುವ ವಿಚಾರಗಳು ಕೂತಲ್ಲೆ ಸ್ಕ್ರೋಲ್ ಡೌನ್ ಮಾಡುತ್ತ ಕಮೇಂಟ್ ಹಾಕುತ್ತಾ ಸಂತೋಷ ಪಡುವ ಜನ. ತಿಯೇಟರ್ ನತ್ತ ಮುಖ ಮಾಡದೆ ಅಂಗೈಯಲ್ಲೆ ಆಕಾಶ ತೊರಿಸುವ ಹಾಗೂ ಮನರಂಜನೆ ಕೂತಲ್ಲೆ ಅನುಭವಿಸುತ್ತಿದ್ದಾರೆ. ಟ್ರೋಲಿಂಗ್ ಟ್ರೆಂಡ್ ನದ್ದೆ ಹವ.  *ಟ್ರೆಂಡಿಂಗ್* ಕಲೆಗೆ ಮೊದಲ ಆದ್ಯತೆ ಇದ್ದ ಪರಿಸರ ಬದಲಿಸಿದೆ. ಕಲಸರಸ್ವತಿ ಎಲ್ಲರನ್ನೂ ಕೈ ಬೀಸಿ ಕರೆದು ಅದರಲ್ಲಿ ಕಲೆಗಾರರನ್ನ ಮಾತ್ರ ಆರಿಸುತ್ತಾಳೆ ಎಂಬ ಪುರಾತನ ನುಡಿ ಮರೆಯಾದಂತಿದೆ. ಹಳೆಯ ಚಲನಚಿತ್ರಗಳ ಹಾಡುಗಳ ಸಾಲು ಸಾಲು ಮೈಮನ...